Sunday, February 22, 2009

Funny Havyaka Dilogues...

೧. ಮಲೆನಾಡಿನ ಯಾವುದೋ ವಿಶೇಷದ ಮನೆ,
" ತಡಿ ತಡಿ ಅಂದಿ , ಕೇಳಿದ್ನಿಲ್ಲೆ, ಗಡ್ ಬಡೆ ಮಾಡಿ ಹಾಕ್ಭುಟ, ಹರ್ದೋಗವನೆ ಮಾರಾಯ್ತಿ!"
(ಅಪ್ಪೆ ಹುಳಿ ಬಡಿಸಿದ ಕೂಸನ್ನು ಬೈದುಕೊಳ್ಳುವ ಪರಿ)

."ತೋ, ಒಂದೂ ಏಳ್ತಾ ಇಲ್ಲೆ ಮಾರಾಯ್ತಿ, ಆ ಭಟ್ರಿಗಾರೂ ಒಂದು ಎದ್ದಿದ್ರೆ ಸಾಕಾಗಿತ್ತು!"
(ಶ್ರಾದ್ಧದ ದಿನ ಅಡುಗೆಮನೆಯಲ್ಲಿ "ತೊಡದೇವು" ಮಾಡುತ್ತಿದ್ದ ಹೆಂಗಸರು:)
೩.
"ಬೆಳಗಿನ ಜಾವದ ತಂಕ ಅಷ್ಟೇನೂ ಚೊಲೋ ಆಗಲ್ಲೆ , ಆದ್ರೆ ಬೆಳ್ಗಿನ್ ಜಾವದಲ್ಲಿ ಆ ಹೆಗ್ಡೇರು ಮಂಡಿ ಹಚ್ಚಿ ಮಾಡ್ದಾ ನೋಡು, ಎಂತಾ ಮಾಡ್ದ್ವೇ! ಯಂಗಂತೂ ಅವು ಮಾಡಿದ್ದು ಸಾಕು ನೋಡು, ನಿಂಗೆ?!"
(ಯಕ್ಷಗಾನ ನೋಡಿಕೊಂಡು ಬಂದ ಹುಡುಗಿಯರಿಬ್ಬರು ಮಾತಾಡಿಕೊಳ್ಳುತ್ತಿದ್ದಿದ್ದು!)
೪. "ಅಲ್ಲಾ ಭಾವಯ್ಯಾ, ನಿನಗೇಳದು ಯಂಗೆ ಎದ್ದಿದ್ದಿದ್ರೆ, ಜಡದು ಕಾಣಸ್ತಿದ್ದಿ ಮಾರಾಯ!! ಚೆ!"
(ಇಸ್ಪೀಟು ಮಂಡಲದಲ್ಲಿ ಮಾತುಕತೆ!)
೫. "ಭಾವ ನೀನು ಯನ್ನ ಹತ್ರ ಮಲ್ಕ್ಯತ್ತೆ ಅಂತ ಹೇಳಿದ್ದಕ್ಕೆ ನಾನು ಹಾಸ್ಗೆ ಬಿಚ್ಚಿ ಇಟ್ಟಿದ್ದಿದ್ದಿ. ನೀ ನೋಡಿರೆ ಬೆಳತಂಕ ಆಟ ಆಡಿದ್ದೆ!"
( ಬೆಳಗಿನ ವರೆಗೂ ಇಸ್ಪೀಟು ಆಡಿದ ಭಾವನನ್ನ ತರಾಟೆಗೆ ತೆಗೆದುಕೊಂಡ ನಾದಿನಿ..
೬. "ಅವು ಮಾಡ್ತೀ ಮಾಡ್ತೀ ಅಂತ ಹೇಳಿ ಕಡಿಗೂ ಮಾಡಿದ್ವೇ ಇಲ್ಲೆ ನೋಡೇ ಅತ್ಗೆ! ನಾನು ಕಾದಿದ್ದೇ ಬಂತು!"
(ಫೋನು)

೭. ೮೦ರ ಅಜ್ಜಿಯೊಂದು ಮನೆಯ ಹಿತ್ತಿಲಲ್ಲಿ ಗೊಣಗುತ್ತಿತ್ತು!
" ಮನ್ನೆ ಮನೆಲಿ ಸತ್ನಾರಣ್ ಕತೆ, ಜನಾ ಅಂದ್ರೆ ಜನ, ಯಾನು ಕಚ್ಚೆನ ತೊಳ್ದು ಹಿತ್ಲಾಕಡೆ ನ್ಯಾಲೆ ಮೇಲೆ ವಣ್ಸಿದಿದ್ದಿ, ಸುಬ್ರಾಯನೋ ಎಂತೋ ಅಲ್ಲೆ ಪಕ್ಕಕ್ಕೆ ಹಾಕಿದಿದ್ದ, ಬೆಳ್ಗೆ ಬೆಗ್ಗನೆ ಕತ್ಲೇಲೇ ಸ್ನಾನ ಮಾಡ್ಕ್ಯಂಡು ಕಚ್ಚೆ ಸುತ್ತಿದ್ದಿ, ತುರ್ಕೇ ಅಂದ್ರೆ ತುರ್ಕೇ! ಕಡಿಗೆ ನೋಡಿರೆ ಹುಚ್ಚೂ ಮುಂಡೆ ಮಕ್ಳು, ಯನ್ ಕಚ್ಚೆ ಕೊಚ್ಚಿ ಕವಳದ್ ಬಟ್ಲಾಗೆ ಇಟಿದ, ಯಾನು ಹೊಗೆಸೊಪ್ಪು ಸುತ್ತಿಗಿದಿ,!!